Saturday, March 14, 2009

ಈ ವರ್ಷದ ಕಲ್ಲಂಡಿ watermelon

ಈ ಸಲದ ಕಲ್ಲಂಗಡಿ ಮಾರ್ಕೆಟ್ ನಲ್ಲಿ ಭರ್ಜರಿಯಾಗಿದೆ. ಹಸಿರು-ಹಳದಿ ಪಟ್ಟಿ ಸೀರೆಯುಟ್ಟ ಹೆಣ್ಣಿನ ಒಳಜಗತ್ತು ಇಷ್ಟು ವರ್ಣಮಯ! ರಂಗೋ ರಂಗು. ಬೇಸಿಗೆಗೆ ಇದನ್ನು ಸವಿಯದಿದ್ದರೆ ಬದುಕಲ್ಲಿ ಏನೋ ಕಳಕೊಂಡ ಹಳವಂಡ. ಈ ಕೆಂಗುಲಾಬಿ ಬಣ್ಣ ಬದುಕಿಗೆ ತುಂಬ ಹತ್ತಿರದ ಬಣ್ಣ. ಜೀವರಸ ಉಕ್ಕಿಸುವ ಈ ಬಣ್ಣ ನಮ್ಮನ್ನು ಯಾವುದೊ ಧ್ಯಾನಸ್ಥ ಮನಸ್ಥಿತಿಗೆ ತಳ್ಳುತ್ತದೆ. ಮುಂದೆ ಬರುವ ಮಳೆಗಾಲದವರೆಗೆ ಈ ಬಣ್ಣ, ಅದರೊಳಗಿನ ರಸ, ಸವಿ ಆಸ್ವಾದಿಸುವುದು ನಿಜಕ್ಕೂ ಆಹ್ಲಾದಕರ.
ಕಲ್ಲಂಗಡಿಯ ಅದ್ಭುತ ಚಿತ್ರವೊಂದನ್ನು ಕಲಾವಿದೆ, ಫೊಟೊಗ್ರಾಫರ್ ವೀಣಾ ನರಸಶೆಟ್ಟಿ ಸೆರೆ ಹಿಡಿದಿದ್ದಾರೆ. ನೋಡಿ ಆನಂದಿಸಿ.

No comments:

Post a Comment